ಅಲ್ಪರ ಸಂಗದಿ ಹಾಲನ್ನ ಉಂಡು ನೀ ತೇಗಿದರೂ
ಕಲ್ಪತರು ಹಿಡಿದು ಈಚಲ ಮರದಡಿ ಕುಳಿತು ಕುಡಿದರೂ
ಅಭಿಮಾನ ಭಂಗವಲ್ಲದೆ ಮತ್ತೇನು ಶಿವಚೆನ್ನ !
ಚೆನ್ನುಡಿ
ಗುರುವಾರ, ಮಾರ್ಚ್ 5, 2015
22. ಚೆನ್ನುಡಿ
ಗುರುವಾರ, ಜನವರಿ 1, 2015
21. ಚೆನ್ನುಡಿ
ನೀ ಏಸು ಓದಿದರೇನು, ಕಂಪು ಪೂಸಿಕೊಂಡರೇನು
ನಡೆ-ನುಡಿಯೊಳು ಸೌಜನ್ಯದ, ಸಂಸ್ಕಾರವಿಲ್ಲದೊಡೆ
ನೀ ಸಗಣಿಯೊಳು ಮಿಂದೆದ್ದ ಹುಳುವಂತೆ ಶಿವಚೆನ್ನ
೦೧.೦೧.೧೫
ಬುಧವಾರ, ಡಿಸೆಂಬರ್ 24, 2014
20. ಚೆನ್ನುಡಿ
ಬಿಟ್ಟಿ ಸಿಕ್ಕಿತೆಂದು ದುಡಿಯದೇ ನೀ ಎಂದೂ ಉಣಬೇಡ ಅವರಿವರ ತಲೆಯೊಡೆದು ದುರ್ಮಾರ್ಗದಿ ಹಣಗಳಿಸಬೇಡ ದುರ್ನೀತಿಗೆ ಮನವೆಂದೂ ನೀ ಕೊಡಬೇಡ ಶಿವಚೆನ್ನ ೨೫.೧೨.೧೪
ಮಂಗಳವಾರ, ಡಿಸೆಂಬರ್ 23, 2014
19. ಚೆನ್ನುಡಿ
ವೆಚ್ಚಕ್ಕೆ ಹಣವಿರಲು, ಇಚ್ಚೆಯನರಿತು ನಡೆವ ಸತಿ ಇರಲು
ಬೆಚ್ಚನೆಯ ಮನೆಯೊಳು ಮಕ್ಕಳಿರಲು ಮುಪ್ಪಿನಾ ಕಾಲಕ್ಕೆ ತಾಯ್ತಂದೆಯರ ಹೊರದೂಡುವನ ಮೆಚ್ಚನು ಶಿವಚೆನ್ನ
೨೪.೧೨.೧೪.
ಸೋಮವಾರ, ಡಿಸೆಂಬರ್ 22, 2014
18.ಚೆನ್ನುಡಿ
ವೇಷವ ತೊಟ್ಟು, ನೀ ಜಗದ ಜನರ ಮೋಸದಿ ವಂಚಿಸೆ
ವೇದೋಪನಿಷತ್ತು, ಬೈಬಲ್, ಕುರಾನ್ಗಳ ಓದಿದರೇನು ?
ಪಾಪದ ಫಲವ ನೀ ಉಣ್ಣಲೇ ಬೇಕು ಶಿವಚೆನ್ನ
೨೨.೧೨.೧೪
ಶುಕ್ರವಾರ, ಡಿಸೆಂಬರ್ 19, 2014
17. ಚೆನ್ನುಡಿ
ಕುಡಿದು ಮಡದಿ, ಮಕ್ಕಳ ದಿನ ಬಿಡದೆ ಕಾಡುವವನ
ಕರೆದು ಬುದ್ಧಿಯ ಗುದ್ದಿ ಹೇಳಿದರು ಮತ್ತೆ ಮದಿರೆಗೆ ಜಾರು
ವನ ಮರ್ಕಟಕೆ ನೀತಿ ಪಾಠ ಭೋಧಿಸಿದಂತೆ ಶಿವಚೆನ್ನ !
೨೦.೧೨.೧೪
ಗುರುವಾರ, ಡಿಸೆಂಬರ್ 18, 2014
16. ಚೆನ್ನುಡಿ
ಮೈಮರೆತು ವಿದ್ಯೆಯ ಕಲಿಯದೆ ಕಳೆದ ಹೊತ್ತು
ಕೈಜಾರಿ ನೆಲಕೆ ಬಿದ್ದೊಡೆದ ಬಾಳೆಂಬ ಮುತ್ತು
ಕೈ ಮುಗಿದರೂ ಮತ್ತೆಂದು ಬರದು ಶಿವಚೆನ್ನ
೧೯.೧೨.೧೪