ಬಿಟ್ಟಿ ಸಿಕ್ಕಿತೆಂದು ದುಡಿಯದೇ ನೀ ಎಂದೂ ಉಣಬೇಡ ಅವರಿವರ ತಲೆಯೊಡೆದು ದುರ್ಮಾರ್ಗದಿ ಹಣಗಳಿಸಬೇಡ ದುರ್ನೀತಿಗೆ ಮನವೆಂದೂ ನೀ ಕೊಡಬೇಡ ಶಿವಚೆನ್ನ ೨೫.೧೨.೧೪
ಬುಧವಾರ, ಡಿಸೆಂಬರ್ 24, 2014
ಮಂಗಳವಾರ, ಡಿಸೆಂಬರ್ 23, 2014
19. ಚೆನ್ನುಡಿ
ವೆಚ್ಚಕ್ಕೆ ಹಣವಿರಲು, ಇಚ್ಚೆಯನರಿತು ನಡೆವ ಸತಿ ಇರಲು
ಬೆಚ್ಚನೆಯ ಮನೆಯೊಳು ಮಕ್ಕಳಿರಲು ಮುಪ್ಪಿನಾ ಕಾಲಕ್ಕೆ ತಾಯ್ತಂದೆಯರ ಹೊರದೂಡುವನ ಮೆಚ್ಚನು ಶಿವಚೆನ್ನ
೨೪.೧೨.೧೪.
ಸೋಮವಾರ, ಡಿಸೆಂಬರ್ 22, 2014
18.ಚೆನ್ನುಡಿ
ವೇಷವ ತೊಟ್ಟು, ನೀ ಜಗದ ಜನರ ಮೋಸದಿ ವಂಚಿಸೆ
ವೇದೋಪನಿಷತ್ತು, ಬೈಬಲ್, ಕುರಾನ್ಗಳ ಓದಿದರೇನು ?
ಪಾಪದ ಫಲವ ನೀ ಉಣ್ಣಲೇ ಬೇಕು ಶಿವಚೆನ್ನ
೨೨.೧೨.೧೪
ಶುಕ್ರವಾರ, ಡಿಸೆಂಬರ್ 19, 2014
17. ಚೆನ್ನುಡಿ
ಕುಡಿದು ಮಡದಿ, ಮಕ್ಕಳ ದಿನ ಬಿಡದೆ ಕಾಡುವವನ
ಕರೆದು ಬುದ್ಧಿಯ ಗುದ್ದಿ ಹೇಳಿದರು ಮತ್ತೆ ಮದಿರೆಗೆ ಜಾರು
ವನ ಮರ್ಕಟಕೆ ನೀತಿ ಪಾಠ ಭೋಧಿಸಿದಂತೆ ಶಿವಚೆನ್ನ !
೨೦.೧೨.೧೪
ಗುರುವಾರ, ಡಿಸೆಂಬರ್ 18, 2014
16. ಚೆನ್ನುಡಿ
ಮೈಮರೆತು ವಿದ್ಯೆಯ ಕಲಿಯದೆ ಕಳೆದ ಹೊತ್ತು
ಕೈಜಾರಿ ನೆಲಕೆ ಬಿದ್ದೊಡೆದ ಬಾಳೆಂಬ ಮುತ್ತು
ಕೈ ಮುಗಿದರೂ ಮತ್ತೆಂದು ಬರದು ಶಿವಚೆನ್ನ
೧೯.೧೨.೧೪
ಬುಧವಾರ, ಡಿಸೆಂಬರ್ 17, 2014
15. ಚೆನ್ನುಡಿ
ಸಾಧಿಸದೆ ಸಿದ್ಧಿಸದು ಎಂದೂ ಜಗದಿ ಜಯದ ತಿಲಕ
ಭೇದಿಸದೆ ವೃದ್ಧಿಸದು ಬೀಜಾಕ್ಷರಗಳ ಜ್ಞಾನದ ಬೆಳಕ
ಗುರು, ಗುರಿಯಿಲ್ಲದೊಡೆ ಗುದ್ದಾಡುವೆಯೋ ಶಿವಚೆನ್ನ
ಮಂಗಳವಾರ, ಡಿಸೆಂಬರ್ 16, 2014
14. ಚೆನ್ನುಡಿ
ಬಲಿಷ್ಟರ ಜೊತೆ ಸೆಣಸಾಡದವರ ಶೌರ್ಯ, ಪ್ರತಾಪ
ಕನಿಷ್ಟ ಕರುಣೆಯಿಲ್ಲದೆ, ಮಕ್ಕಳ ಕೊಂದ ಪಾತಕಿಗಳ
ವೃಷಣವಿಲ್ಲದ ಷಂಡರು ಇವರೆನ್ನಬೇಕು ಶಿವಚೆನ್ನ
13. ಚೆನ್ನುಡಿ
ಉಪ್ಪಿಲ್ಲದ ಊಟ, ಒಪ್ಪಿ ನಡೆಯದವಳ ಜೊತೆಯಾಟ
ಉಂಡು ಮಲಗಿದರೂ ಪಲ್ಲಂಗದಲಿ ಬರೀ ಕಚ್ಚಾಟ
ಸಂಸಾರದಿ ಹಗ್ಗ ಜಗ್ಗಾಟದಂತೆ ಶಿವಚೆನ್ನ
12. ಚೆನ್ನುಡಿ
ಗಂಟು ಇರುವವರೆಗೂ ಎಲ್ಲರೂ ನಿನ್ನ ನೆಂಟರಿಷ್ಟರು
ಕುಂಟು ನೆಪವೊಡ್ಡಿ ತಿರುಗುವರು ತಾ ಹಿಂದೆ ಮುಂದೆ
ಕರಗಲು ನೋಡ ಬಳಿಗೆಂದೂ ಸುಳಿಯರು ಶಿವಚೆನ್ನ
1.ಚೆನ್ನುಡಿ
ಕರೆದವರ ಮನೆಗೆ ಬರಿಗೈಯಲ್ಲಿ ನೀ ಹೋಗದಿರು
ಕರದಲ್ಲಿರೆ ಹೂವು, ಹಣ್ಣು, ಸಿಹಿ ತಿಂಡಿಯ ಗಂಟು ಕಮಲದಂತರಳುವುದು ಮುಖ ನೋಡ ಶಿವಚೆನ್ನ
11. ಚೆನ್ನುಡಿ
ಇದ್ದೂ ಇಲ್ಲವೆಂದು ಕಷ್ಟದಿ ಕೊಡಲೊಪ್ಪದವನ ಸಂಪತ್ತು
ಬಿದ್ದು ಗೆದ್ದಲು ಹತ್ತಿದ ಮರದಂತೆ, ಹರಿವ ನೀರೊಳು
ತೊಳೆದ ಹುಣಸೆಯ ಹಣ್ಣಿನಂತೆ ಶಿವಚೆನ್ನ
10. ಚೆನ್ನುಡಿ
ದಾನ ಧರ್ಮಗಳ ಮಾಡದವನ ಮನೆ ತುಂಬ
ಧನ ಕನಕಾದಿ ಸಕಲ ಸಂಪತ್ತು ಇದ್ದೇನು ಫಲ
ದಾರಿಯೊಳು ಸಿಕ್ಕ ಜಾಲಿಯ ಮುಳ್ಳಂತೆ ಶಿವಚೆನ್ನ !
9. ಚೆನ್ನುಡಿ
ಉಳ್ಳವರಿಗೆ ಇದ್ದು ಉಣ್ಣಲಾರರು ನೂರೆಂಟು ರೋಗ ರುಜಿನ ದುಡಿದುಣ್ಣುವ ಕಷ್ಟಜೀವಿಗಳಿಗೆ ರಾಗಿ ಅಂಬಲಿಯೇ ಪರಮಾನ್ನ ನಿಶ್ಚಿಂತೆಯಿಂದ ನಿದ್ರೆ ನಿರಾಳ ಶಿವಚೆನ್ನ
8. ಚೆನ್ನುಡಿ
ಹೊತ್ಹೆತ್ತು, ತುತ್ತಿತ್ತು ನಮ್ಮ ಸಲಹುವವಳು ಹೆಣ್ಣು
ಮುತ್ತಿತ್ತು, ಸುಖವಿತ್ತು ವಂಶ ಬೆಳಗುವವಳು ಹೆಣ್ಣು ಮುಟ್ಟಾದಳೆಂದು ಹೊರದಬ್ಬುವಿರೆಕೊ ಶಿವಚೆನ್ನ
7. ಚೆನ್ನುಡಿ
ಧನ ಕನಕಾದಿ ವಸ್ತ್ರ ಮುಗಿಯೆ, ತಿರುಗಿ ನೋಡದ ಸೂಳೆ ಪರಿಪರಿಯಾಗಿ ನೀ ಬೇಡಿದರೂ ಒದ್ದು ಹೊರದಬ್ಬುವಳು ಕೈಹಿಡಿದವಳ ಮರೆತರೆ ದುರ್ಗತಿಯಲ್ಲದೇನು ಶಿವಚೆನ್ನ
6. ಚೆನ್ನುಡಿ
ಇದ್ದಾಗ ದಾನ,ಧರ್ಮದಲಿ ನೀ ಗಳಿಸು ಸ್ನೇಹ ಪ್ರೀತಿ
ಸತ್ತಾಗ ನೀ ಕೊಂಡೊಯ್ಯಲಾರೆ ಗಳಿಸಿಷ್ಟ ಆಸ್ತಿ ಪಾಸ್ತಿ
ಬಿದ್ದಾಗ ನಿನ್ನ ಹೂವಂತೆ ಮೇಲೆತ್ತಿಕೊಳ್ಳುವರು ಶಿವಚೆನ್ನ
5. ಚೆನ್ನುಡಿ
ಸೇಬು ಸಿಕ್ಕಿತೆಂದು ಗರ್ವದಿ ಸೀಬೆಯ ತಿಪ್ಪೆಗೆಸೆಯದಿರು
ಸುಖವು ಬಂತೆಂದು ಕಡು ಕಷ್ಟವ ನೀ ಮರೆತು ಮೆರೆದಾಡಲು ಜಗದಿ ನಿನಗಿಂತ ಅಜ್ಞಾನಿ ಮತ್ತೊಬ್ಬನಿಲ್ಲವೋ ಶಿವಚೆನ್ನ
4. ಚೆನ್ನುಡಿ
ಮುತ್ತಿತ್ತವಳ ಮೋಹದಲಿ ಮೈಮರೆತು ಮದದಲಿ
ತುತ್ತಿತ್ತು ಹೊತ್ಹೆತ್ತವಳ ಮುಪ್ಪಿನಲಿ ನೀ ಕಡೆಗಾಣಿಸೆ
ಗೊತ್ತು ಗುರಿಯಿಲ್ಲದ ನಾಯಂತಲೆಯುವೆ ಶಿವಚೆನ್ನ
3. ಚೆನ್ನುಡಿ
ಸೋಮವಾರ, ಡಿಸೆಂಬರ್ 15, 2014
2. ಚೆನ್ನುಡಿ
ಕೊಟ್ಟು ಕೆಡಬೇಡ ಕುಡುಕಂಗೆ ಕೊಡದಿರಬೇಡ ದೀನಂಗೆ
ಹಸಿದು ಬೇಡುವವನ ಹೋಗೆನ್ನದೆ ಅನ್ನವನು ನೀ ಇಕ್ಕಲು
ಮುಕ್ಕಿದವನ ಮೊಗದಲ್ಲಿ ಕಸುವು ನೋಡ ಶಿವಚೆನ್ನ